Class - 3 Assignment NO - 1

Language: Hindi
Subject: हिंदी > वाचन

NATIONAL PUBLIC SCHOOL

JAYANAGAR

ACADEMIC YEAR - 2021 -22

CLASS ASSIGNMENT NO - 1

CLASS - 3 STD

SUBJECT - KANNADA

DATE:13/7/2021

1 . ಅಂಜುಬುರುಕ ಈ ಪದಕ್ಕೆ ವಿರುದ್ಧ ಪದ ಗುರುತಿಸಿ .

2. ಚಿತ್ರ ನೋಡಿ ವಾಕ್ಯ ಬರೆಯಿರಿ;

3. 'ಮೂದಲಿಸು' ಈ ಪದದ ಅರ್ಥ ________

4. ಕಾಡಿಗೆ ಮರ ಕಡಿಯಲು ಬಂದವರು ಯಾರು?

5. ಮಾನವ ಯಾರನ್ನು ಅಂಜುಬುರುಕ ಪ್ರಾಣಿ ಎಂದು ಹೇಳಿದನು?

6."ಸಾಲುಮರದ ತಿಮ್ಮಕ್ಕನನ್ನು ನೋಡಿ ಕಲಿ" ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು?

7. ಪ್ರಕೃತಿಯನ್ನು ಉಳಿಸುವುದು ಹೇಗೆ ?

8. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ವಾದ-ವಿವಾದಗಳಲ್ಲಿ ಯಾರು ಹೆಚ್ಚಾಗಿ ಮನಪರಿವರ್ತನೆ ಮಾಡಿಕೊಂಡರು?

9. ಅತಿವೃಷ್ಟಿ ಎಂದರೇನು?

10. ಕೊಟ್ಟಿರುವ ಗದ್ಯಭಾಗವನ್ನು ಓದಿಕೊಂಡು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ:

ವಿದ್ಯಾವಂತ ಮೂರ್ಖರು. ಒಂದು ಹಳ್ಳಿಯಲ್ಲಿ ನಾಲ್ಕು ಸ್ನೇಹಿತರು ವಾಸವಾಗಿದ್ದರು. ಒಂದು ದಿನ ಉತ್ತಮ ವ್ಯಾಸಂಗಕ್ಕಾಗಿ ಕಾಶಿಗೆ ಹೋಗಬೇಕೆಂದು ಮಾತನಾಡಿಕೊಳ್ಳುತ್ತಿದ್ದರು. ಆಗ ಒಬ್ಬ ಸ್ನೇಹಿತ, ಸಾಮಾನ್ಯ ಜ್ಞಾನ ಉತ್ತಮ ಎಂದು ನಾಲ್ಕನೆಯ ಸ್ನೇಹಿತ ಹೇಳಿದನು. ಯಾರು ಅವನ ಮಾತು ಕೇಳದೆ ಅವರೆಲ್ಲ ಕಾಶಿಗೆ ಹೊರಟುಹೋದರು. ಕೆಲವು ವರ್ಷಗಳ ನಂತರ ಆ ಸ್ನೇಹಿತರು ಊರಿಗೆ ವಾಪಸ್ ಬಂದರು. ಆದರೆ ವಿದ್ಯಾವಂತರಾಗಿದ್ದ ರಿಂದ ಹಳ್ಳಿಯಲ್ಲಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಅದಕ್ಕೆ ಮತ್ತೆ ಅವರು ನಗರದ ಕಡೆಗೆ ಹೊರಟರು ದಾರಿಯಲ್ಲಿ, ಸತ್ತ ಸಿಂಹವನ್ನು ನೋಡಿದರು. ವಿದ್ಯಾವಂತರು ಅದಕ್ಕೆ ಜೀವತುಂಬಲು ನೋಡಿದರು ಅದಕ್ಕೆ ಜೀವ ಬಂದಿತ್ತು. ಆದರೆ ನಾಲ್ಕನೆಯ ಸ್ನೇಹಿತ ಹೇಳಿದ ಸಿಂಹಕ್ಕೆ ಜೀವ ಬಂದರೆ ಅದು ನಮ್ಮನ್ನು ಸಾಯಿಸುತ್ತದೆ ಎಂದು ಹೇಳಿದನು. ಕೊನೆಗೆ ಅವರನ್ನೆಲ್ಲ ಸಿಂಹ ತಿಂದುಬಿಟ್ಟಿತು.

1. ಹಳ್ಳಿಯಲ್ಲಿ ಎಷ್ಟು ಜನ ಸ್ನೇಹಿತರಿದ್ದರು?

2. ಸ್ನೇಹಿತರೆಲ್ಲರೂ ಎಲ್ಲಿಗೆ ಹೋಗಲು ನಿರ್ಧರಿಸಿದರು?

3. ಯಾವ ಕಾರಣಕ್ಕಾಗಿ ಸ್ನೇಹಿತರು ಕಾಶಿಗೆ ಹೊರಟರು?

4. ಸ್ನೇಹಿತರು ನಗರಕ್ಕೆ ಹೋಗುವಾಗ ಏನನ್ನು ನೋಡಿದರು?

5. ಸ್ನೇಹಿತ ಪದದ ಅರ್ಥ