class 4 Class Assignment No - 4

Language: English
Subject: English language > Articles
Age: 9 - 10

NATIONAL PUBLIC SCHOOL

JAYANAGAR

ACADEMIC YEAR - 2021 - 22

CLASS ASSIGNMENT NO - 4

CLASS
- 4

SUBJECT - KANNADA

I. ಕೊಟ್ಟಿರುವ ಗದ್ಯಭಾಗವನ್ನು ಓದಿ, ಕೆಳಗಿನ ಪ್ರಶ್ನೆಗಳಿಗೆ, ಕೊಟ್ಟಿರುವ ಆಯ್ಕೆಗಳ ಸಹಾಯದಿಂದ ಉತ್ತರಿಸಿರಿ.

ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೂ ಬದುಕಲು ಗಾಳಿ ಬಹುಮುಖ್ಯವಾಗಿ ಬೇಕಾಗಿದೆ. ಗಾಳಿಯು ನಮಗೆ ಭೂಮಿಯ ವಾತಾವರಣದಿಂದ ದೊರೆಯುತ್ತದೆ. ಭೂಮಿಯನ್ನು ಆವರಿಸಿಕೊಂಡಿರುವ ವಾಯುವಿನ ಪದರಕ್ಕೆ ''ವಾಯುಗೋಳ'' (Atmosphere) ಎನ್ನುವರು. ಭೂಮಿಯ ವಾಯುಗೋಳದ ಅತ್ಯಂತ ಕೆಳಗಿನ ಪದರವನ್ನು ''ಹವಾಗೋಳ'' (Troposphere) ಎನ್ನುವರು. ಇದು ಭೂಮಿಯಿಂದ ಸುಮಾರು ಹದಿನೈದು ಕಿಲೋಮೀಟರ್ ಗಳವರೆಗೆ ವ್ಯಾಪಿಸಿದೆ. ಇದು ಎತ್ತರಕ್ಕೆ ಹೋದಂತೆಲ್ಲ ಈ ಪದರದ ತಾಪ ಕಡಿಮೆಯಾಗುತ್ತಾ ಹೋಗುತ್ತದೆ. ನೀರಾವಿ, ನೈಟ್ರೋಜನ್, ಆಕ್ಸಿಜನ್, ಈ ಪ್ರದೇಶದಲ್ಲಿ ಹೇರಳವಾಗಿ ಕಂಡುಬರುತ್ತವೆ. ಹವಾಗೋಳದ ಮೇಲ್ಭಾಗದ ಸೀಮೆಗೆ ''ಹವಾಸೀಮೆ'' (Tropopause) ಎನ್ನುವರು.

1. ವಾಯುಗೋಳ ಎಂದರೇನು?

2. ಭೂಮಿಯ ಮೇಲಿನ ಜೀವಿಗಳಿಗೆ ಬದುಕಲು ಬಹುಮುಖ್ಯವಾಗಿ ಏನು ಬೇಕು?

3. ಭೂಮಿಯ ವಾಯುಗೋಳದ ಅತ್ಯಂತ ಕೆಳಗಿನ ಪದರವನ್ನು ಏನೆಂದು ಕರೆಯುವರು?

4. ಹವಾಗೋಳ ಭೂಮಿಯಿಂದ ಎಷ್ಟು ಕಿಲೋಮೀಟರ್ ವರೆಗೆ ವ್ಯಾಪಿಸಿದೆ?

5.ಹವಾಗೋಳದ ಮೇಲ್ಭಾಗದ ಸೀಮೆಗೆ _____________ ಎನ್ನುವರು.

II. ಕೆಳಗೆ ಕೊಟ್ಟಿರುವ ಪದವನ್ನು ಕೂಡಿಸಿ ಬರೆಯಿರಿ:

1. ಒಂದು + ಆದ

2.ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ:

3.'ತೋಡು' ಈ ಪದದ ಅರ್ಥ ಗುರುತಿಸಿ:

4.'ಜಯ' ಈ ಪದದ ವಿರುದ್ಧ ಪದ ___________

5. ವರ್ಣಮಾಲೆಯಲ್ಲಿ __________ವಿಧಗಳಿವೆ.

6. ಅಜ್ಜಿ ಎಲ್ಲರಿಗೂ__________ ಹಂಚಿದರು.

7. ಇಂಗುಗುಂಡಿಯ ಪ್ರಯೋಜನವೇನು?

8. ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ__________ ನೋಡಿದಳು.

9. ಎರೆಗೊಬ್ಬರವನ್ನು___________ ದಿಂದ ತಯಾರಿಸುತ್ತಾರೆ.

10. ಮಕ್ಕಳು ಎಲ್ಲಿಗೆ ಹೊರಸಂಚಾರ ಹೊರಟರು?